Wednesday, December 22, 2010

ಮಲೆನಾಡಿನ factಗಳು... ಭಾಗ-1

ಮಲೆನಾಡಿನ ಕೆಲವು ವಸ್ತುಸ್ಥಿತಿಗಳನ್ನು ಹಾಸ್ಯಭರಿತ ಧಾಟಿಯಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ನಿಮಗೆ ಇಷ್ಟವಾದರೆ ಸರಿ, ಇಲ್ಲದಿದ್ದರೆ ನಿಮ್ಮ ಸಮಯ ವ್ಯರ್ಥ ಮಾಡಿದ್ದಕ್ಕೆ ಕ್ಷಮೆಯಿರಲಿ,

1. ಭಟ್ರ ಮನೆ ಕೊಟ್ಟಿಗೆಯಲ್ಲಿ ನೇತು ಹಾಕಿರೋ ಚೀಲದಲ್ಲಿ ಕೋಳಿ ಕೂಗ್ತಿದೆ ಅಂದ್ರೆ, ಅವತ್ತು ಭಟ್ರ ಮನೇಲಿ ಹರಕೆ ಇದೆ ಅಂತ ಅರ್ಥ!

2. ದೀಪಾವಳಿ ಬಿಟ್ಟು ಬೇರೆ ಟೈಮಲ್ಲಿ ಪಟಾಕಿ ಅಥ್ವಾ ಈಡಿನ ಸೌಂಡು ಕೇಳ್ತು ಅಂದ್ರೆ, ಯಾರೋ ಹೊಗೆ ಹಾಕಿಸ್ಕೊಂಡಿದಾರೆ ಅಂತ ಅರ್ಥ!

3. ಮನೇಲಿ ನೆಲದ ಮೇಲೆ ರಕ್ತದ ಕಲೆ ಆಗಿದೆ ಅಂದ್ರೆ, ಯಾರೋ ತೋಟದಿಂದ ಇಂಬ್ಳ ಹತ್ತಿಸ್ಕೊಂಡು ಬಂದಿದಾರೆ ಅಂತ ಅರ್ಥ!

4. ಯಾರ್ದಾದ್ರೂ ಮನೇಲಿ ಹುರುಳಿ ಸಾರು ಆಗಿದೆ ಅಂದ್ರೆ, ಹೂಟೆ ಶುರುವಾಯ್ತು ಅಂತ ಅರ್ಥ!

5. ಯಾವ್ದಾದ್ರೂ ರಸ್ತೆ ರಿಪೇರಿ ಆಗ್ತಿದೆ ಅಂದ್ರೆ, "ಎಲೆಕ್ಷನ್" ಬಂತು ಅಂತ ಅರ್ಥ!

6. ಸಿಡಿಲು ಬಂತು ಅಂದ್ರೆ, ಎರಡು ದಿನ ಫೋನು ಸತ್ತು ಹೋಯ್ತು ಅಂತ ಅರ್ಥ!

ಮುಂದುವರೆಯುವುದು...

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ

6 Comments:

Aravinda said...

2. ದೀಪಾವಳಿ ಬಿಟ್ಟು ಬೇರೆ ಟೈಮಲ್ಲಿ ಪಟಾಕಿ ಅಥ್ವಾ ಈಡಿನ ಸೌಂಡು ಕೇಳ್ತು ಅಂದ್ರೆ, ಯಾರೋ ಹೊಗೆ ಹಾಕಿಸ್ಕೊಂಡಿದಾರೆ ಅಂತ ಅರ್ಥ!

malnad kade ellappa idnella maadtaare? totakke banda manga odsakke pataaki hachtaare anta helu :)

Prasanna S P said...

ಮಂಗನ ಕಾಟಕ್ಕೆ ಪಟಾಕಿ ಹೊಡೆಯುವ ಅಭ್ಯಾಸ ಇತ್ತೀಚಿನದು, ಆದರೆ ಸುಮಾರು ವರ್ಷದ ಹಿಂದೆ ಯಾರಾದರೂ ಸತ್ತಾಗ ಈಡು ಹೊಡೆಯುತ್ತಿದ್ದರಂತೆ! :-)

Guruprasad . Sringeri said...

ಪ್ರಸನ್ನ ಅವರೇ ಇನ್ನೊಂದು important ಬಿಟ್ಟಿದೀರಿ....

"ಯಾರ ಮನೇಲಾದ್ರೂ ಟಿ.ವಿ. ಅಥವಾ ರೇಡಿಯೋ ಕೇಳ್ತಾ ಇದೆ ಅಂದ್ರೆ ಕರೆಂಟ್ ಇದೆ ಅಂತ ಅರ್ಥ.... :)

Guruprasad . Sringeri said...

nice blog... continue writing...

Prasanna S P said...

@ಗುರುಪ್ರಸಾದ್,
***"ಯಾರ ಮನೇಲಾದ್ರೂ ಟಿ.ವಿ. ಅಥವಾ ರೇಡಿಯೋ ಕೇಳ್ತಾ ಇದೆ ಅಂದ್ರೆ ಕರೆಂಟ್ ಇದೆ ಅಂತ ಅರ್ಥ.... *****
ಇದೇ ರೀತಿಯ ಇನ್ನೂ ಕೆಲವನ್ನು ಬರೆದಿಟ್ಟಿದ್ದೀನಿ, ಆದರೆ ಪೋಸ್ಟ್ ಮಾಡಿಲ್ಲ. ಕಂತುಗಳಲ್ಲಿ ಪ್ರಕಟಿಸೋಣ ಅಂತ. :-)

ಬ್ಲಾಗ್ ಮೆಚ್ಚಿದ್ದಕ್ಕಾಗಿ ಧನ್ಯವಾದಗಳು,
-ಪ್ರಸನ್ನ.ಎಸ್.ಪಿ

Guruprasad . Sringeri said...

ಹೌದು ಸಾರ್.... ನೀವು ಹೇಳಿದ್ದು ಸರಿ... ನಾನು ಹೇಳುತ್ತಿರುವುದು ಮಲೆನಾಡಿನಲ್ಲಿ ಕರೆಂಟ್ ಇದೆ ಎಂದರೆ ಅದೇ... ವಿಶೇಷ... :)

Post a Comment